Sunday, 7 June 2015

'ಮೂರನೇ ಕಿವಿ' (ಕಿವುಡು ಮಗು ಮಾತು ಕಲಿತ ಕತೆ !) :
ಮಾತನಾಡುವ ಪ್ರತಿಯೊಬ್ಬರಿಗೂ ಮಾತು ಕಲಿಯಲು ಬಾಯಿ ಮಾತ್ರ ಕಾರಣವಲ್ಲ. ಇಲ್ಲಿ ಕಿವಿಯ ಪಾತ್ರವೇ ಪ್ರಧಾನ. ಕಿವಿಯ ಮೂಲಕ ಕೇಳಿಸಿಕೊಳ್ಳುವ ಮಾತುಗಳನ್ನೇ ಮನುಷ್ಯ ಮೊದಲು ಕಲಿಯುವುದು; ನಂತರ ಅವೇ ಮಾತುಗಳನ್ನು ಬಾಯಿಯ ಮೂಲಕ ಹೊರ ಹಾಕುವುದು. ಹೀಗಿರುವಾಗ ಕಿವಿ ಕೇಳಿಸದ ಮಗುವಿನ ಗತಿಯೇನು?
ಇಂತಹ ಪ್ರಶ್ನೆಯೊಂದು ಮಗು ನಿರಂಜನನ ತಂದೆ ತಾಯಿಯರ ಎದುರು ಗಹಗಹಿಸಿತು. ಇದರಿಂದ ಬೆದರದ ಈ ದಂಪತಿ ತಮ್ಮ ಹುಟ್ಟು ಕಿವುಡು ಮಗುವಿನ ಕಿವಿಯಲ್ಲಿ, ಮಿದುಳಿನಲ್ಲಿ ಶಬ್ದಗಳನ್ನು ತುಂಬಿ ಬಾಯಿಯಿಂದ ಮಾತು ಹೊರಡಿಸಿದ ಮನ ಕಲಕುವ ಅನುಭವ ಕಥನವೇ ಇಲ್ಲಿದೆ. ಮಗುವಿನ ಮನದಲ್ಲಿ ಭಾಷೆ ಜೊತೆಗೆ ಭಾವನೆಗಳನ್ನೂ ಬಿತ್ತಲು ಮಾಡಿದ ಪ್ರಯೋಗ ತೀರಾ ಹೊಸತು. ಇಲ್ಲಿ ಸಾಹಿತ್ಯದ ತೇವ, ವಿಜ್ಞಾನದ ಶಿಸ್ತು, ಹೃದಯದ ಭಾವನೆ, ಭಾಷೆಯ ಸರಳತೆ ಮಿಳಿತಗೊಂಡಿರುವುದು ವಿಶೇಷ. ಹುಟ್ಟು ಕಿವುಡು ನಿರಂಜನ ಇಂದು ಮಾತುಗಾರ, ಭಾಷಣಕಾರ ಹಾಗೂ ನಟ! ಇದನ್ನು ಸಾಧ್ಯವಾಗಿಸಿದ ತಾಯಿ ದೀಪಾ ಅವರ ಸಂಕಟ, ಶ್ರಮ, ಸಾಧನೆಗಳ ಅಕ್ಷರ ರೂಪವೇ ಈ ಕೃತಿ.


No comments:

Post a Comment