Wednesday, 17 June 2015

Monday, 8 June 2015

 

ಕನವರಿಕೆ
ಮಂಡ್ಯ ರಮೇಶನ ಕನವರಿಕೆಗಳಿಗೆ ಎರಡು ಮುಖಗಳು. ಒಂದು: ಮಾಧ್ಯಮಮುಖಿಯಾದದ್ದು. ಇದರಲ್ಲಿ ರಂಗಭೂಮಿ, ನಟನೆ, ಚಲನಚಿತ್ರ, ಕಿರುತೆರೆ, ಭಾಷೆ, ಇತ್ಯಾದಿ ಕುರಿತ ಅನಿಸಿಕೆಗಳಿವೆ. ಎರಡು: ವ್ಯಕ್ತಿಮುಖಿಯಾದದ್ದು, ಇದರಲ್ಲಿ ನಮ್ಮ ನಡುವೆ ಇರುವ, ಇಲ್ಲದಿರುವ ವ್ಯಕ್ತಿಗಳ ವೈಶಿಷ್ಟ್ಯವನ್ನು ಕುರಿತ ಅನಿಸಿಕೆಗಳಿವೆ. ಇವು ಬರಿಯ ಅನಿಸಿಕೆಗಳಾಗದೆ, ಕನವರಿಕೆಗಳಾಗಿ ರೂಪಾಂತರವಾಗಿರುವುದರಿಂದ ಸರೀಕನ ಸ್ವಗತಗಳಂತೆ ಶುರುವಾಗಿ ಅಂತಿಮವಾಗಿ ಜಗುಲಿ ಮೇಲೆ ಹಾಡುತ್ತಾ ಕುಳಿತ ಜನಪದ ಕವಿಯ ಆಲಾಪವಾಗುತ್ತಾ ಹೋಗುತ್ತವೆ. ಉತ್ಪ್ರೇಕ್ಷೆ, ವೈಭವೀಕರಣಗಳು ನುಸುಳಿದರೂ ಅವು ಬರೆಯುವವನ ಲೋಕ ತಬ್ಬುವ ಆದ್ರ್ರತೆಯಿಂದ ಆಪ್ತವಾಗುತ್ತವೆ


'ವ್ಯಕ್ತಿತ್ವ ವಿಕಾಸ' (ಬದುಕು ಬದಲಿಸುವ ಪುಸ್ತಕ) :
ಅನೇಕರು ಶಿಕ್ಷಣ ಪಡೆಯುತ್ತಾರೆ. ಹೊಟ್ಟೆಪಾಡಿಗಾಗಿ ಏನೇನೋ ಮಾಡುತ್ತಾರೆ. ಅತೃಪ್ತ ಸಿರಿವಂತರಿದ್ದಾರೆ; ಸಂತೃಪ್ತ ಬಡವರಿದ್ದಾರೆ. ತಾವು ಸುಖಿಗಳಾಗಬೇಕು ಎಂಬುದೇ ಎಲ್ಲರ ಮೂಲ ಗುರಿ. ಆದರೆ ಎಲ್ಲರೂ ಸುಖಿಗಳಾಗಿರುವುದಿಲ್ಲ ! ಇದಕ್ಕಾಗಿ ಸಮಾಜವನ್ನೋ, ಹಿರಿಯರನ್ನೋ, ದೈವವನ್ನೋ ದೂಷಿಸುವ ಬದಲು ನಮ್ಮ ವ್ಯಕ್ತಿತ್ವವನ್ನು ಪರಿಶೀಲನೆಗೆ ಒಳಪಡಿಸಿ ಪರಿವರ್ತನೆ ತಂದುಕೊಳ್ಳಲು ಸಾಧ್ಯ. ವ್ಯಕ್ತಿತ್ವ ವಿಕಾಸದ ಹಲವಾರು ಮಾರ್ಗಗಳನ್ನು ತೋರಿಸುವ ಈ ಪುಸ್ತಕ ಓದುಗರ ಬದುಕಿನ ಗತಿಯನ್ನೇ ಬದಲಿಸಬಹುದು.

Sunday, 7 June 2015


'ಅಕ್ಷಯ ನೇತ್ರ' (ಅಂಧನೊಬ್ಬನ ಆತ್ಮೀಯ ಕತೆ) :
ಮೈಸೂರಿನ ಕಾನೂನು ಪ್ರಾಧ್ಯಾಪಕ ಪ್ರೊ.ಎಂ.ಎಸ್.ವೇಣುಗೋಪಾಲ ಅವರು ಹುಟ್ಟಿನಿಂದ ದೃಷ್ಟಿ ದೋಷವುಳ್ಳವರು. ಆದರೆ ಅವರು ತಮ್ಮ ಬದುಕು ಕಟ್ಟಿಕೊಂಡ ರೀತಿ ಅನನ್ಯ. ಅಲ್ಲಿ ಸೋಲುಗಳಿವೆ. ಅವಮಾನ ಇದೆ. ಆದರೆ ಯಾವುದಕ್ಕೂ ಅಂಜದ ವೇಣೂಜಿ ಸಾಧನೆಯ ಶಿಖರವನ್ನು ಏರಿದ್ದಾರೆ. ಬೇರೆಯವರ ಬಳಿ ಓದಿಸಿಕೊಂಡು, ಪಠ್ಯವನ್ನು ರೆಕಾಡರ್ು ಮಾಡಿಕೊಂಡು ಬಿಎ, ಅರ್ಥಶಾಸ್ತ್ರದಲ್ಲಿ ಎಂಎ, ಇಂಗ್ಲಿಷ್ ಎಂಎ, ಬಿಎಡ್, ಎಂಎಡ್, ಇಂಗ್ಲಿಷ್ ಡಿಪ್ಲೊಮಾ, ಎಲ್ಎಲ್ಬಿ, ಎಲ್ಎಲ್ಎಂ, ಪದವಿ ಪಡೆದುಕೊಂಡಿದ್ದಾರೆ. ಕಾನೂನು ಪಂಡಿತರಾಗಿ, ಕಾನೂನು ಕಾಲೇಜಿನ ಪ್ರಾಧ್ಯಾಪಕರಾಗಿ ಸಾವಿರಾರು ಶಿಷ್ಯರನ್ನು ಬೆಳೆಸಿದ್ದಾರೆ. 70ಕ್ಕೂ ಹೆಚ್ಚು ನಾಟಕಗಳನ್ನು ಬರೆದಿದ್ದಾರೆ. ನೂರಾರು ಹಾಡುಗಳನ್ನು ರಚಿಸಿದ್ದಾರೆ. ನಾಟಕಗಳನ್ನು ನಿದರ್ೇಶಿಸಿದ್ದಾರೆ. ಲೀಲಾಜಾಲವಾಗಿ ಈಜುತ್ತಾರೆ. ಸಾಹಸ ಕ್ರೀಡೆಗಳಲ್ಲೂ ಭಾಗಿ. ಬದುಕನ್ನು ಭಾವಗೀತೆಯನ್ನಾಗಿಸಿಕೊಂಡ ಅವರ ಸಾಹಸದ ಕತೆ ಕಣ್ಣು ಇರುವ ಜನರಿಗೂ ದಾರಿದೀಪ. ಅವರ ಬದುಕಿನ ಹಾದಿಯಲ್ಲಿ ಮರುಪಯಣ ಮಾಡಿಸುವ ಪುಸ್ತಕ.
'ಮೂರನೇ ಕಿವಿ' (ಕಿವುಡು ಮಗು ಮಾತು ಕಲಿತ ಕತೆ !) :
ಮಾತನಾಡುವ ಪ್ರತಿಯೊಬ್ಬರಿಗೂ ಮಾತು ಕಲಿಯಲು ಬಾಯಿ ಮಾತ್ರ ಕಾರಣವಲ್ಲ. ಇಲ್ಲಿ ಕಿವಿಯ ಪಾತ್ರವೇ ಪ್ರಧಾನ. ಕಿವಿಯ ಮೂಲಕ ಕೇಳಿಸಿಕೊಳ್ಳುವ ಮಾತುಗಳನ್ನೇ ಮನುಷ್ಯ ಮೊದಲು ಕಲಿಯುವುದು; ನಂತರ ಅವೇ ಮಾತುಗಳನ್ನು ಬಾಯಿಯ ಮೂಲಕ ಹೊರ ಹಾಕುವುದು. ಹೀಗಿರುವಾಗ ಕಿವಿ ಕೇಳಿಸದ ಮಗುವಿನ ಗತಿಯೇನು?
ಇಂತಹ ಪ್ರಶ್ನೆಯೊಂದು ಮಗು ನಿರಂಜನನ ತಂದೆ ತಾಯಿಯರ ಎದುರು ಗಹಗಹಿಸಿತು. ಇದರಿಂದ ಬೆದರದ ಈ ದಂಪತಿ ತಮ್ಮ ಹುಟ್ಟು ಕಿವುಡು ಮಗುವಿನ ಕಿವಿಯಲ್ಲಿ, ಮಿದುಳಿನಲ್ಲಿ ಶಬ್ದಗಳನ್ನು ತುಂಬಿ ಬಾಯಿಯಿಂದ ಮಾತು ಹೊರಡಿಸಿದ ಮನ ಕಲಕುವ ಅನುಭವ ಕಥನವೇ ಇಲ್ಲಿದೆ. ಮಗುವಿನ ಮನದಲ್ಲಿ ಭಾಷೆ ಜೊತೆಗೆ ಭಾವನೆಗಳನ್ನೂ ಬಿತ್ತಲು ಮಾಡಿದ ಪ್ರಯೋಗ ತೀರಾ ಹೊಸತು. ಇಲ್ಲಿ ಸಾಹಿತ್ಯದ ತೇವ, ವಿಜ್ಞಾನದ ಶಿಸ್ತು, ಹೃದಯದ ಭಾವನೆ, ಭಾಷೆಯ ಸರಳತೆ ಮಿಳಿತಗೊಂಡಿರುವುದು ವಿಶೇಷ. ಹುಟ್ಟು ಕಿವುಡು ನಿರಂಜನ ಇಂದು ಮಾತುಗಾರ, ಭಾಷಣಕಾರ ಹಾಗೂ ನಟ! ಇದನ್ನು ಸಾಧ್ಯವಾಗಿಸಿದ ತಾಯಿ ದೀಪಾ ಅವರ ಸಂಕಟ, ಶ್ರಮ, ಸಾಧನೆಗಳ ಅಕ್ಷರ ರೂಪವೇ ಈ ಕೃತಿ.