Monday, 13 July 2015

ವಸ್ತುವೊಂದು ಕಳೆದುಹೋದ ನಂತರವೇ ಅದರ ಮಹತ್ವ-ಅಗತ್ಯ ತೀವ್ರವಾಗಿ ಗಮನಕ್ಕೆ ಬರುವುದಂತೆ. ಬಹುಶಃ ತಾಯಿ ವಿಷಯದಲ್ಲಂತೂ ಈ ಮಾತು ಯಥಾವತ್ ಅನ್ವಯಿಸುತ್ತದೆ. ತಾಯಿಯ ಕಣ್ಮರೆಯ ಆಳ ವಿಸ್ತಾರ ಕಳೆದುಕೊಂಡವರಿಗೆ ಮಾತ್ರ ನಿಲುಕಲು ಸಾಧ್ಯ. ಹಾಗಾಗಿ ಇಲ್ಲಿನ ಅಗಲಿದ ಅಮ್ಮಂದಿರ 'ನೆನಪು'ಗಳ ಹಿನ್ನೆಲೆಯಲ್ಲಿರುವ ಕನವರಿಕೆಗಳು, ಪಶ್ಚಾತ್ತಾಪಗಳು ಉಳಿದವರ ಬದುಕಿಗೆ ದಾರಿದೀಪದಂತಿವೆ, ಮುನ್ನೆಚ್ಚರಿಕೆಯಾಗಿವೆ; ಹೊಣೆನಿರ್ವಹಣೆಯ ಅವಕಾಶವನ್ನೂ ಕಲ್ಪಿಸುತ್ತವೆ.

No comments:

Post a Comment