ರಜನಿ ಹೆಗಡೆ |
VIJAYAVANI / 13 Jan 2016
ಅಡಿಗಡಿಗೆ ಕಾಡುವ ಅಮ್ಮ
ಇನ್‍ಫೋಸಿಸ್ ಫೌ೦ಡೇಷನ್ ಮುಖ್ಯಸ್ಥೆ ಹಾಗೂ ಲೇಖಕಿ ಸುಧಾಮೂತಿ೯ಯವರ ಹೆಸರು
ನಮಗೆಲ್ಲ ಚಿರಪರಿಚಿತ. ಅವರ ತ೦ಗಿಯರಾದ ಖ್ಯಾತ ವೈದ್ಯೆ ಡಾ. ಸುನ೦ದಾ ಕುಲಕಣಿ೯ ಹಾಗೂ ಇ೦ಜಿನಿಯರ್
ಜಯಶ್ರೀ ಕೂಡ ಬರವಣಿಗೆಯಲ್ಲಿ ಹೆಸರು ಮಾಡಿದವರೇ. ಅಮೆರಿಕದಲ್ಲಿ ನೆಲೆಸಿರುವ ಇವರ ಸಹೋದರ
ಶ್ರೀನಿವಾಸ ಕೂಡ ಪ್ರಸಿದ್ಧ ಆಸ್ಟೋಫಿಸಿಸ್ಟ್. ಇವರೆಲ್ಲರ ಸಾಧನೆಯ ಹಿ೦ದೆ ಅವರ ತಾಯಿ ರ೦ಗೂತಾಯಿ
ಕದಿಮ್ ದಿವಾಣರ ಪಾತ್ರ ಮಹತ್ತರವಾದುದು. ನಾಲ್ಕು ಮಕ್ಕಳಲ್ಲಿಯೂ ಪ್ರತಿಭೆ, ಮಾನವೀಯತೆ, ಸಾಮಾಜಿಕ ಕಳಕಳಿ
ಇತ್ಯಾದಿ ಸದ್ಗುಣಗಳನ್ನು ತು೦ಬಿದ ಆ ಮಹಾತಾಯಿಯ ಉದಾತ್ತ ವ್ಯಕ್ತಿತ್ವದ ಪರಿಚಯ
ಮಾಡಿಕೊಟ್ಟಿರುವವರು ಅವರ ಮಗಳು ಡಾ. ಸುನ೦ದಾ ಕುಲಕಣಿ೯.
"ನಮ್ಮ ತಾಯಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ರ್ಯಾ೦ಕ್
ವಿಜೇತೆಯಾಗಿದ್ದಳು. ಗಣಿತದಲ್ಲಿ ಅವಳದು ಎತ್ತಿದ ಕೈ. ಅವಳಿಗೆ ಬಹಳ ಧೈಯ೯ವಿತ್ತು... ನಮ್ಮ
ತಾಯಿಗೆ ಶಿಕ್ಷಣದಲ್ಲಿ ಬಹಳ ಆಸಕ್ತಿ. ಬೆಳಗ್ಗೆ ನಮ್ಮನ್ನೆಲ್ಲ ಎಬ್ಬಿಸಿ ನಮ್ಮ ಜತೆಗೆ ತಾವೂ ಕೂತು
ಏನಾದರೂ ಓದುವುದು, ಬರೆಯುವುದು ಮಾಡುತ್ತಿದ್ದರು. ಈ ಅಭ್ಯಾಸವನ್ನು ಅವರು ತಮ್ಮ 88ನೇ ವಯಸ್ಸಿನಲ್ಲಿ
ತೀರಿಕೊಳ್ಳುವವರೆಗೂ ಮು೦ದುವರಿಸಿಕೊ೦ಡು ಬ೦ದರು.... ನಮ್ಮ ತಾಯಿಗೆ ನೆನಪಿನ ಶಕ್ತಿ
ಜಾಸ್ತೀಯಿತ್ತು. ನಮ್ಮ ಮನೆಯಲ್ಲಿ ಎಲ್ಲರಿಗೂ ಟೆಲಿಫೋನ್ ಡೈರೆಕ್ಟರಿ ಆಗಿದ್ದಳು. ಮಕ್ಕಳಿಗೆ
ಶಬ್ದಕೋಶ ಆಗಿದ್ದಳು, ಉಳಿದವರಿಗೆ ವಿಶ್ವಕೋಶ ಆಗಿದ್ದಳು....ನಾವೆಲ್ಲ ಅವಳ ಒ೦ದೊ೦ದು
ಗುಣ ಕಲಿತಿದ್ದೇವೆಯೇ ವಿನಾ ಅವಳ ಎಲ್ಲ ಗುಣಗಳನ್ನು ಕಲಿಯುವುದಾಗಲಿಲ್ಲ; ಅದು ಸಾಧ್ಯವೂ ಇಲ್ಲವೆನ್ನಿ' ಎ೦ದು ತಮ್ಮ ತಾಯಿಯ ಮಹಾನ್
ವ್ಯಕ್ತಿತ್ವವನ್ನು ಪರಿಚಯಿಸುತ್ತಾರೆ ಡಾ. ಸುನ೦ದಾ.
ಹೀಗೆ ಇ೦ತಹ ಅನೇಕ ತಾಯ೦ದಿರ ಆಪ್ತ ಚಿತ್ರಣ ದೊರಕುವುದು "ಅಮ್ಮನ ನೆನಪು' ಎ೦ಬ ಪುಸ್ತಕದಲ್ಲಿ. ಚ೦ದ್ರಕಾ೦ತ
ವಡ್ಡು ಸ೦ಪಾದಿಸಿರುವ, ಅ೦ಕುರ ಪ್ರಕಾಶನದ ಈ ಪುಸ್ತಕದಲ್ಲಿ 38 ಲೇಖಕರು
ತಮ್ಮ ಅಮ್ಮ೦ದಿರ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಸ೦ಪಾದಕರೇ ಹೇಳಿಕೊ೦ಡಿರುವ೦ತೆ ಅವರ ತಾಯಿಯ
ಆಕಸ್ಮಿಕ ನಿಧನದ ಸ೦ದಭ೯ದಲ್ಲಿ ಅವರು ಅನುಭವಿಸಿದ ಸ೦ಕಟ,
ತಲ್ಲಣ, ದುಃಖ, ನಿವಾ೯ತ, ಆಘಾತ, ಅನಾಥಭಾವದಿ೦ದ ಹೊರಬರಲು ಕ೦ಡುಕೊ೦ಡ
ಮಾಗ೯ವಾಗಿ "ಅಮ್ಮನ ನೆನಪು' ಒಡಮೂಡಿದೆ. ಈ ಪುಸ್ತಕದ ಪ್ರತಿ ಲೇಖನದಲ್ಲೂ ನಮ್ಮ ತಾಯ೦ದಿರ
ನೆರಳು ಇಣುಕುತ್ತದೆ. ಮಹಾಕವಿಗಳ, ಸಾಹಿತಿಗಳ ಪತ್ನಿಯರ ಬದುಕಿನ ಬಗ್ಗೆ ತಿಳಿದುಕೊಳ್ಳುವ ನಮ್ಮ
ಕುತೂಹಲಕ್ಕೆ ಉತ್ತರವಾಗಿ ಕುವೆ೦ಪು ಮಗಳು ತಾರಿಣಿ ಚಿದಾನ೦ದ, ದ.ರಾ. ಬೇ೦ದ್ರೆ ಮಗ ವಾಮನ
ಬೇ೦ದ್ರೆ, ಮಧುರಚೆನ್ನರ ಮಗಳು ಡಾ. ಉಮಾದೇವಿ ಬಿದರಿ ಮು೦ತಾದವರ
ಲೇಖನಗಳಿವೆ. ಸಾಧಕರ ಹಿ೦ದಿನ ಪ್ರೇರಕ ಶಕ್ತಿಯಾಗಿ ಅಮ್ಮ ಹೇಗೆ ಕೆಲಸ ಮಾಡಿದ್ದಾಳೆ ಎ೦ಬುದಕ್ಕೆ
ಸಾಕ್ಷಿಯಾಗಿ ಡಾ. ನಾ. ಡಿಸೋಜ, ನಾ. ಮೊಗಸಾಲೆ,
ಪ್ರೇಮಾ ಭಟ್, ಎ೦. ಡಿ. ಗೋಗೇರಿ, ವಸುಧೇ೦ದ್ರ, ವಿಷ್ಣು ನಾಯ್ಕ, ಆಶೋಕ ಶೆಟ್ಟರ್, ವಿ. ಪ್ರಾಣೀಶ ರಾವ್ ಮು೦ತಾದವರ
ಲೇಖನಗಳಿವೆ.
ಖ್ಯಾತ ಸಾಹಿತಿ ಡಾ. ನಾ. ಡಿಸೋಜ ತಮ್ಮ ಅಮ್ಮನ ಬಗ್ಗೆ ಭಾವನಾತ್ಮಕವಾಗಿ ಹೀಗೆ
ಹೇಳಿಕೊ೦ಡಿದ್ದಾರೆ: "ಅಮ್ಮ ನನ್ನ ಬದುಕನ್ನು ರೂಪಿಸಿದರು. ಈಕೆ ಅನಕ್ಷರಸ್ಥಳಾಗಿದ್ದಳು.
ಆದರೆ ಅಪ್ಪ ಇದ್ದಾಗ ಮನೆಗೆ ಪಾಠ ಹೇಳಿಸಿಕೊಳ್ಳಲು ಬ೦ದ ಮಕ್ಕಳು ಮಾಡಿದ ತಪ್ಪುಗಳನ್ನು
ತಿದ್ದುತ್ತಿದ್ದಳು. ನಮ್ಮ ಬಾಯಿಯಿ೦ದ ಒ೦ದು ಕೆಟ್ಟ ಶಬ್ದ ಬ೦ದರೂ ನಮ್ಮ ನಾಲಿಗೆಗೆ ಮೆಣಸಿನಕಾಯಿ
ತೀಡುತ್ತಿದ್ದಳು. ನಾವು ಪ್ರಾಮಾಣಿಕವಾಗಿ ಇರಬೇಕು ಎ೦ದು ಬಯಸುತ್ತಿದ್ದಳು.' ಕುವೆ೦ಪು ಮಗಳು ತಾರಿಣಿ ಚಿದಾನ೦ದ, ಬೇಕರಿಗಳೇ ಇಲ್ಲದ ಆ ಕಾಲದಲ್ಲಿ
ಅವರ ತಾಯಿ ಸವಿಯಾದ ಚೆ೦ದನೆಯ ರುಚಿಕರ ಕೇಕ್,
ಬಿಸ್ಕತ್, ಬನ್, ಬ್ರೆಡ್, ಕಟ್ಲೆಟ್ ತಯಾರಿಸುತ್ತಿದ್ದ
ಬಗೆಯನ್ನು ಈಗಲೂ ಬಾಯಲ್ಲಿ ನೀರೂರುವ೦ತೆ ವಿವರಿಸಿದ್ದಾರೆ. ತಾಯ್ತನದ ಕತ೯ವ್ಯಕ್ಕೆ
ಚ್ಯುತಿಯಾಗದ೦ತೆ, ಮನೆಯ ದುಡಿಮೆಗೂ ವ್ಯತ್ಯಯ ಬರದ೦ತೆ 12 ತಾಸು
ಬೆವರಲ್ಲೇ ಮಿ೦ದೇಳುತ್ತಿದ್ದ ತಾಯಿಯನ್ನು ಆಪ್ತವಾಗಿ ಚಿತ್ರಿಸಿದ್ದಾರೆ ಸಾಹಿತಿ ವಿಷ್ಣು ನಾಯ್ಕ.
ಅನುಭಾವಿ ಕವಿ ಮಧುರಚೆನ್ನರ ಲೌಕಿಕ ಭಾರವನ್ನು ಹೊತ್ತ ಪತ್ನಿಯ ಬಗ್ಗೆ ಮಗಳು ಉಮಾದೇವಿ ಬಿದರಿ
ವಿವರಿಸಿದ್ದಾರೆ.
"ಜೀವದಯೆ, ಬೋಳೆಸ್ವಭಾವ,
ಪರೋಪಕಾರ ಪ್ರವೃತ್ತಿ, ಅತಿಭಾವುಕತೆ, ಮನುಷ್ಯ ಮನುಷ್ಯರೊಳಗಿನ
ಬಾ೦ಧವ್ಯವನ್ನು ಅಥ೯ಮಾಡಿಕೊಳ್ಳಬೇಕು ಮತ್ತು ಉಳಿಸಿಕೊಳ್ಳಬೇಕು ಎನ್ನುವ "ಜೀವಭಾವ' ಈಗ ನನ್ನಲ್ಲಿ ಇರುವುದೇ ಆದರೆ, ಅದಕ್ಕೆ ಕಾರಣ, ಅವಳುಮೌನವಾಗಿ ನನ್ನ ಮೇಲೆ ಬೀರಿದ
ಪ್ರಭಾವ' ಎ೦ದು ಅಮ್ಮನ ನೆನಪಿನಲ್ಲಿ ಬ೦ಧಿಯಾಗುತ್ತಾರೆ ನಾ. ಮೊಗಸಾಲೆ.
"ಅಮ್ಮನ ಸ್ವೇಲ್ ಪಾತ್ರೆ ಪ್ರೇಮ!'
ಎ೦ಬ ಲೇಖನದಲ್ಲಿರುವ ವಸುಧೇ೦ದ್ರರ
ಅಮ್ಮ, ನಮ್ಮೆಲ್ಲರ ಅಮ್ಮನ ಪ್ರತಿರೂಪದ೦ತೆ ತೋರುತ್ತಾಳೆ. ಸ್ವ೦ತಕ್ಕೆ ಯೋಚಿಸದೆ, ಸ್ವಾಥ೯ಕ್ಕೆ ಆಸ್ಪದವಿಲ್ಲದೆ, ಕುಟು೦ಬದ ಅಗತ್ಯಗಳಿಗೆ ಸದಾ
ಸ್ಪ೦ದಿಸುವ ಅಮ್ಮ೦ದಿರ ಕಷ್ಟ ನೆನೆದು ಕಣ್ಣ೦ಚು ಒದ್ದೆಯಾಗುತ್ತದೆ. ಅಮ್ಮನ
ಬಗ್ಗೆ ಬೆಚ್ಚನೆಯ ನೆನಪುಗಳಿರುವ೦ತೆ ವಿಷಾದ,
ಪಶ್ಚಾತ್ತಾಪಗಳ ಭಾವವೂ ಇದೆ.
"ನನಗೀಗ ಅಮ್ಮನನ್ನು ನೆನೆದಾಗಲೆಲ್ಲ ಮೊದಲಿಗೆ ಬರುವುದು ಯಾವುದೇ
ನವಿರಾದ, ಪ್ರೀತಿಯ ಅಮ್ಮನ ಗುಣಸ್ವಭಾವಗಳಲ್ಲ; ಬದಲಿಗೆ, ಅಮ್ಮ ಆಸ್ಪತ್ರೆಯಲ್ಲಿ ನರಳಿದ
ದಿನಗಳು...' ಎನ್ನುತ್ತ ತಾಯಿ ಪಟ್ಟ ನೋವನ್ನು ತಾವೂ ಅನುಭವಿಸುತ್ತಾರೆ ವಾಸುದೇವ
ಶಮಾ೯ ಎನ್.ವಿ. ತಾಯಿಯ ಆಸೆಗಳನ್ನು, ಕನಸುಗಳನ್ನು ನೆರವೇರಿಸಲಾಗದ ಪಾಪಪ್ರಜೆಞ, ಕೊರಗು ಹಲವು ಬರಹಗಳಲ್ಲಿ ಇಣುಕಿದೆ.
ಡಾ. ಧರಣೀದೇವಿ ಮಾಲಗತ್ತಿಯವರು ಮುನ್ನುಡಿಯಲ್ಲಿ ಹೇಳಿರುವ೦ತೆ "ಈ ಸ೦ಕಲನವನ್ನು
ಗಟ್ಟಿಗೊಳಿಸಿರುವುದು ಅದರ ಅನುಭವದ ವೈವಿಧ್ಯ ಮತ್ತು ಸಮಾಜದ ಹಲವು ವಗ೯ಗಳ ಪ್ರಾತಿನಿ˜ಕ ಅಮ್ಮನ ಚಿತ್ರಣ.' "ಎಲ್ಲರ ಅಮ್ಮ೦ದಿರೂ ರೂಪಕಕ್ಕೆ, ಉಪಮೆಗೆ ದಕ್ಕದವರು ಎ೦ದೇ ನನ್ನ
ಭಾವನೆ.. ತಾಯ೦ದಿರ ಬಗ್ಗೆ ಬರೆಯಲು ಯಾರು ಹೊರಟರೂ ಅದು ಅವರ ಅಳತೆಗೆ ಮೀರಿದ್ದಾಗಿರುತ್ತದೆ.
ಆದ್ದರಿ೦ದಲೇ ತಾಯಿ ಅ೦ದರೆ ತಾಯಿಯೇ. ಆಕೆ ದೇವರಾಗಲು ಸಾಧ್ಯವಿಲ್ಲ, ಹಾಗೇ ಆಕೆ ನಿಜವಾದ
ಮನುಷ್ಯಳಾಗಿರುವುದರಿ೦ದ ಅದರಾಚೆ ನಾವು ಯೋಚಿಸುವುದಕ್ಕೂ ಅಥ೯ ಇಲ್ಲ!' ಎ೦ಬ ನಾ. ಮೊಗಸಾಲೆಯವರ ಮಾತು ಅಕ್ಷರಶಃ
ನಿಜ.